SHIMOGA POLICE

Blog of Shimoga Police. This blog is created to post press releases.

Tuesday, January 31, 2012

ಶಿವಮೊಗ್ಗ ಜಿಲ್ಲಾ ಅಪರಾಧ ಪ್ರಕರಣ ದಿ.30-01-2012

ಅಪಘಾತ ಪ್ರಕರಣ :


ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 27/12 ಕಲಂ. 279, 304 (ಎ)
ಐ.ಪಿ.ಸಿ ನಲ್ಲಿ ದಿನಾಂಕ 30-1-2012 ರಂದು ಬೆಳಿಗ್ಗೆ 10;30 ಗಂಟೆ ಸಮಯದಲ್ಲಿ ರಾಜಪ್ಪ
ಬಿನ್ ಲೇ.ವೆಂಕಟಸ್ವಾಮಿ 80 ವರ್ಷ ವಾಸ 7 ನೇಕ್ರಾಸ್ ದೇವರಾಜ ಅಎಸ್ ಬಡಾವಣೆ ಶಿವಮೊಗ್ಗ ರವರು
ಮನೆಯಿಂದ ಹೊಟೇಲ್ ಗೆ ತಿಂಡಿ ತಿನ್ನಲು ಕಾಶಿಪುರ ರೈಲ್ವೆ ಗೇಟ್ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು
ಹೋಗುತ್ತಿದ್ದಾಗ ಹಿಂದಿನಿಂದ ಕೆ.ಎ 14 ಎನ್ 1408ರ ಕ್ರೇನ್ ಚಾಲಕ ದುಡುಕು ಮತ್ತು ನಿರ್ಲಕ್ಷ್ಯತನದಿಂದ
ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಮಾವನವರಿಗೆ ಡಿಕ್ಕೆ ಹೊಡಿಸಿ ಕ್ರೇನ್ ಹಿಂಬಾಗದ ಚಕ್ರ ಮೈಮೇಲೆ
ಬಂದು ತಲೆಗೆ ತೀವ್ರ ತರಹದ ಪೆಟ್ಟಾಗಿ ಸ್ಥಳದಲ್ಲಿಎಐ ಮೃತ ಪಟ್ಟಿರುತ್ತಾರೆ ಎಂದು ಪ್ರಕರಣ ದಾಖಲಿಸಿದೆ.




ಮನುಷ್ಯ ಕಾಣೆ ಪ್ರಕರಣ

1. ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆ ಗುನ್ನೆ ನಂ. 16/2012 ಕಲಂ. ಮನುಷ್ಯ ಕಾಣೆ ಪ್ರಕರಣದಲ್ಲಿ ನಿವೇದಿಸಿಕೊಂಡ
ವರದಿ ದಿ. 19-01-2012 ರಂದು ಪಿಯ್ರಾದಿದಾರರ ಹೆಂಡತಿ ಶ್ರೀಮತಿ ಪದ್ಮಾ ಕೋಂ. ನೇತ್ರೇಶ 30 ವರ್ಷ ಬೋವಿ
ಜನಾಂಗ ಮನೆ ಕೆಲಸ ವಾಸ 2ನೇ ಕ್ರಾಸ ಬೋವಿ ಕಾಲೋನಿ ನವಲೇ, ಶಿವಮೊಗ್ಗ ಸಂಜೆ 4:00 ಗಂಟೆಗೆ ಆಟೋವನ್ನು
ತೆಗೆದುಕೊಂಡು ಮನಡಯಿಂದ ಹೋಗಿದ್ದು ರಾತ್ರಿ 8 ಗಂಟೆಗೆ ಬಂದಾಗ ತನ್ನ ಹೆಂಡಂತಿ ಮನೆಯಲ್ಲಿ ಇರಲಿಲ್ಲ, ಹೊರಗೆ
ಹೋಗಿದ್ದು ರಾತ್ರಿ11:00 ಗಂಟೆಯಾದರೂ ವಾಪಸ್ಸು ಮನೆಗೆ ಬರದೆ ಇದ್ದುದರಿಂದ ಪಿರ್ಯಾದಿದಾರರು ಗಾಬರಿಗೊಂಡು ಸಂಬಂದಿಕರ
ಮನೆಗೆ ಹೋಗಿರ ಹೋಗಿರ ಬಹುದೆಂದು ಎಲ್ಲಾ ಕಡೆ ಹುಡುಕಾಡಿದದೂ ಪತ್ತೆಯಾಗಿರುವುದಿಲ್ಲ, ದಯಾಮಾಡಿ ತನ್ನ ಹೆಂಡಂತಿಯನ್ನು
ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿ.


ದೊಡ್ಡಪೇಟೆಠಾಣೆ ಶಿವಮೊಗ್ಗ : ಮನುಷ್ಯಕಾಣೆ:


2. ಕುಮಾರಿ ರೇಷ್ಮಾ ದಿ.22/01/2012 ರಂದು ತಮ್ಮ ೂರಾದ ರಿಪ್ಪನ್ ಪೇಟೆಗೆ ಹೋಗಿ ತಂದೆಯನ್ನು
ನೋಡಿಕೊಂಡು ಬರುವುದಾಗಿ ಹೇಳಿದಕ್ಕೆ ಪಿಯ್ರಾದುದಾರರು ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗಿ ಜ್ಯೋತಿ
ಬಸ್ಸಿಗೆ ಹತ್ತಿಸಿ ಬಂದಿದ್ದು, ನಂತರ ರಿಪ್ಪನ್ ಪೇಟೆಗೆ ಆತ್ತೆ ಮಾವನಿಗೆ ಪೋನ್ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಬಂದಿರುವುದಿಲ್ಲವೆಂದು
ತಿಳಿದು ಬಂದಿರುತ್ತದೆ. ನಂತರ ೆಲ್ಲಾ ಸಂಬಂದಿಕರ ಮನೆಯಲ್ಲಿ ವಿಚಾರ ಮಾಡಲಾಗಿ ಅಲ್ಲಿಗೂ ಬಂದಿಲ್ಲವೆಂದು ತಿಳಿಸಿದರು.
ನಂತರ ನಂದಿನಿಯ ಸ್ನೇಹಿತೆಯರ ಹತ್ತಿರ ವಿಚಾರ ಮಾಡಿದರೂ ರೇಷ್ಮಾ ಎಲ್ಲಿಗೂ ಬಂದಿಲ್ಲ ೆಂದು ತಿಳಿಯಿತು.
ನನ್ನ ಹೆಂಡತಿಯ ಸಹೋದರಿಯನ್ನು ಪತ್ತೆ ಮಾಡಿಕೊಡಬೇಕಾಗಿ ಇತ್ಯಾದಿ ಇದ್ದ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿದೆ.




ಅಸಹಜ ಸಾವು


ಕುಂಸಿ ಪೊಲೀಸ್ ಠಾಣೆ ಯು ಡಿ ಆರ್ ನ. 01/2012 ಕಲಂ. 174 ಸಿ.ಆರ್.ಪಿ.ಸಿ ರೀತ್ಯಾ
ಪ್ರಕರಣದಲ್ಲಿ ನಿವೇದಿಸಿಕೊಂಡ ವರದಿ. ದಿ-30/01/2012 ರಂದು ಬೆಳಗ್ಗೆ 07.15 ಗಂಟೆಗೆ ಶ್ರೀಮತಿ
ಗಂಗಮ್ಮ ಕೋಂ ವಿಜಯಕುಮಾರ್ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,
ಪಿರ್ಯಾದುದಾರರು ಈಗ್ಗೆ 13 ವರ್ಷಗಳ ಹಿಂದ ವಿಜಯಕುಮಾರ ರವರನ್ನು ಮದುವೆಯಾಗಿದ್ದು ಎರಡು ಹೆಣ್ಣುಮಕ್ಕಳು
ಇದ್ದು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ದಿ-30/01/2012 ರಂದು ಬೆಳಗ್ಗೆ 7 ಗಂಟೆಗೆ ಪಿರ್ಯಾದುದಾರರು
ಮನೆಯಲ್ಲಿದ್ದಾಗ ಯಾರೋ ಬಂದು ಆಯನೂರು ವೈನ್ ಸ್ಟೋರ್ ಬಳಿ ನಿನ್ನ ಗಂಡ ವಿಜಯಕುಮಾರ್ ಇವರು ಸತ್ತು
ಬಿದ್ಷಿದ್ದಾರೆಂದು ತಿಳಿಸಿದ್ದು, ಪಿರ್ಯಾದುದಾರರ ತಕ್ಷಣ ಹೋಗಿ ನೋಡಿದಾಗ ಆಯನೂರು ಎನ್ ಹೆಚ್ 206 ರಸ್ತೆ ಪಕ್ಕದ
ಚರಂಡಿಯಲ್ಲಿ ವಿಜಯಕುಮಾರ್ ಇವರು ಸತ್ತುಬಿದ್ದಿರುವುದು ಕಂಡುಬಂದಿರುತ್ತದೆ. ಪಿರ್ಯಾದುದಾರರ ಗಂಡ ಪ್ರತಿದಿನ
ಸರಾಯಿ ಕುಡಿಯುವ ಅಭ್ಯಾಸವಿದ್ದು ಕುಡಿದ ಅಮಲಿನಲ್ಲಿ ಚರಂಡಿಗೆ ಬಿದ್ದು ಸತ್ತಿದ್ದಾನೆಯೋ ಅಥವಾ ಇನ್ನಾವುದೋ
ಕಾರಣದಿಂದ ಮೃತಪಟ್ಟಿರುತ್ತಾರೆಯೋ ಎಂಬ ಬಗ್ಗೆ ಅನುಮಾನ ಇರುತ್ತದೆ. ಆದ್ದರಿಂದ ಕಾನೂನು ಕ್ರಮ ಜರುಗಿಸಿಕೊಡಿ
ಎಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರ ವ ವರದಿ.