ಶಿವಮೊಗ್ಗ ಜಿಲ್ಲಾ ಅಪರಾಧ ಪ್ರಕರಣಗಳು ದಿ.22/1/12
ಭದ್ರಾವತಿ ನ್ಯೂಟೌನ್ ಠಾಣೆ
ಅಕ್ರಮ ಮದ್ಯ ಮಾರಾಟ ಪ್ರಕರಣ:
ಈ ದಿವಸ ನಾನು ಠಾಣಾ ಸರಹದ್ದಿನಲ್ಲಿ ಪಿಸಿ 764,1474,787, ರವರೊಂದಿಗೆ ಲೋಯರ್ ಹುತ್ತಾದಲ್ಲಿ ಗಸ್ತಿನಲ್ಲಿರುವಾಗ ಸಂಜೆ 6-30 ಗಂಟೆಗೆ ಮಾನ್ಯ ಸಿಪಿಐ ರವರು ಬಿ.ಹೆಚ್. ರಸ್ತೆಯಲ್ಲಿರುವ ರಾಯಲ್ ವೈನ್ ಶಾಪ್ ಪಕ್ಕದಲ್ಲಿ ಅಕ್ರಮವಾಗಿ ಬ್ರಾಂಡಿಯನ್ನು ಮಾರಾಟ ಮಾಡುತ್ತಿದ್ದಾರೆ ಅಂತ ಮಾಹಿತಿ ಬಂದಿದೆ ನೀವುಗಳು ಹೋಗಿ ದಾಳಿ ಮಾಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ ಮೇರೆಗೆ ನಾನು ಸಿಬ್ಬಂದಿಯವರೊಂದಿ ಇಲಾಖಾ ಜೀಪಿನಲ್ಲಿ ಲೋಯರ್ ಹುತ್ತಾದಿಂದ ಹೊರಟು ರಾಯಲ್ ವೈನ್ ಸ್ಟೋರ್ ನ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ ರಾಯಲ್ ವೈನ್ ಶಾಪ್ ಪಕ್ಕದ ಬಲಭಾಗದ ಕಟ್ಟೆಯ ಮೇಲೆ ಒಬ್ಬ ಆಸಾಮಿಯು ಬ್ರಾಂಡಿ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು, ತಕ್ಷಣ ನಾವುಗಳು ಸುತ್ತುವರೆದಾಗ ನಮ್ಮನ್ನು ನೋಡಿದವನು ಓಡಲು ಪ್ರಯತ್ನಿಸಿದಾಗ ಪಿಸಿ 764 ಗುಳ್ಯಪ್ಪ, ಪಿಸಿ 787, ರಾಘವೇಂದ್ರ ರವರು ಓಡಿ ಹೋಗಿ ಹಿಡಿದುಕೊಂಡರು. ನಂತರ ಆತನ ಹೆಸರು ವಿಳಾಸ ಕೇಳಲಾಗಿ ನಾಗಭೂಷಣ ಬಿನ್ ದತ್ತಪ್ಪ, 36 ವರ್ಷ, ವಿಶ್ವ ಕರ್ಮ ಜನಾಂಗ ರಾಯಲ್ ವೈನ್ ಶಾಪ್ ನಲ್ಲಿ ಕೆಲಸ, ವಾಸ ರೇಣುಕಾಂಬ ನಿಲಯ, ಲೋಯರ್ ಹುತ್ತಾ ಭದ್ರಾವತಿ ಅಂತ ತಿಳಿಸಿದ್ದು ನಂತರ ಕಟ್ಟೆಯ ಪಕ್ಕದಲ್ಲಿ 2 ರಟ್ಟಿನ ಬಾಕ್ಸ್ ಗಳಿದ್ದು ಅವುಗಳನ್ನು ಪರಿಶೀಲಿಸಿದಾಗ 180 ಮ್ಯಾಜಿಕ್ ಬ್ಲಾಂಡೆಡ್ ವಿಸ್ಕಿ ಅಂತ ಲೇಬಲ್ ಇರುತ್ತೆ, ಇನ್ನೊಂದು ರಟ್ಟಿನ ಬಾಕ್ಸಿನಲ್ಲಿ ಒಂದು 750 ವಿಂಡ್ಸ್ ಫೈನ್ ವಿಸ್ಕಿ ಲೇಬಲ್ ಇದ್ದು 180 ಎಂ ಎಲ್ ನ ಬಾಟಲಿಗಳಿದ್ದು ಅರ್ದ ಮಧ್ಯ ತುಂಬಿದ 3,ಗುಡ್ ಡೇ ಡೀಲಕ್ಸ್ ವಿಸ್ಕಿ ಬಾಟಲಿಗಳಿದ್ದು ಒಂದು ಒರಿಜಿನಲ್ ಚಾಯ್ಸ್ ಬಾಟಲಿ, ಇನ್ನೊಂದು ವಿಲ್ಲಿಂಗ್ ಟನ್ ಬಾಟಲಿಗಳಿರುತ್ತವೆ, ಇವುಗಳನ್ನು ಪಂಚರ ಸಮಕ್ಷಮ ರಾತ್ರಿ 7-00 ಗಂಟೆಯಿಂದ 8-00 ಗಂಟೆ ವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಳ್ಳಲಾಯಿತು, ಇವುಗಳ ಅಂದಾಜು ಬೆಲೆ 2200/- ರೂ ಇವುಗಳಲ್ಲಿ 5 ಬಾಟಲಿಗಳನ್ನು ರಾಸಾಯನಿಕ ಪರೀಕ್ಷೆಗಾಗಿ ತೆಗೆದು ಸದರಿ ಬಾಟಲಿಗಳಿಗೆ ಬಿಳಿ ಬಟ್ಟೆಯಿಂದ ಸುತ್ತಿ ಹೆಚ್.ಎಂ. ಎಂಬ ಮೊಹರಿನಿಂದ ಶೀಲು ಮಾಡಿರುತ್ತೆ, ನಂತರ ಆಸಾಮಿಗಳನ್ನು ಮತ್ತು ಮಾಲುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಠಾಣೆಗೆ ರಾತ್ರಿ 8-30 ಗಂಟೆಗೆ ಬಂದು ಸ್ವ ದೂರಿನ ಮೇರೆಗೆ ಠಾಣಾ ಗುನ್ನೆ ನಂ. 12/2012, ಕಲಂ: 32,34,36 ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಪ್ರ.ವ.ವರದಿಯನ್ನು ನಿವೇದಿಸಿರುತ್ತೆ.


<< Home