ಶಿವಮೊಗ್ಗ ಜಿಲ್ಲಾ ಅಪರಾಧ ವರದಿ ದಿ. ೨೪/೧/2012
ಕಳವು ಪ್ರಕರಣ;-
ಖಚಿತ ವರ್ತಮಾನದ ಮೇರೆಗೆ ಪಿ ಎಸ್ ಐ ಹಳೆನಗರ ಠಾಣೇ ಭದ್ರಾವತಿರವರು ಆರೋಫಿಗಳಾದ ಅಬ್ರಾಹಾರ್ ಬಿನ್ ಜಾಫರ್ ಸಾಧಿಕ್ 19 ವರ್ಷ, ಚೇತನ್ ಕುಮಾರ್ ಎ, @ ಚೇತು ಬಿನ್ ಆನಂದಕುಮಾರ್ , ಪ್ರಸಾಧ್ ಎಸ್ ಬಿನ್ ಸುಬ್ರಹ್ಮಣಿ 18 ವರ್ಷ ಇವರು 15,000/- ರೂ ಬೆಲೆ ಬಾಳುವ ಎಲ್ ಸಿ ಡಿ ಮಾನಿಟರ್ ಮತ್ತು ಮೊಬೈಲ್ ಪೋನನ್ನು ಮಾರಾಟ ಮಾಡುತ್ತಿದ್ದವರನ್ನು ಬಂದಿಸಿ ಠಾಣೆಯಲ್ಲಿ ಕೆಸು ದಾಖಲಿಸಿರುವರು.
ಇಸ್ಪಿಟು ಜೂಜಾಟ ಪ್ರಕರಣ;-
ಸಿಪಿಐ ಭದ್ರಾವತಿ ನಗರ ವೃತ್ತರವರು ರಾತ್ರಿ ಗಸ್ತು ನಿರ್ವಹಿಸುತ್ತಿರುವಾಗ , ವಿ ಐ ಎಸ್ ಎಲ್ ಸ್ಟೆಡಿಯಂ ಪಕ್ಕದ ಲೈಟು ಬೆಳಕಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದು . ಪಿ ಎಸ್ ಐ ರವರಿಗೆ ದಸ್ತಗಿರಿ ಮಾಡಲು ನಿರ್ದೇಶನ ನೀಡಿದ ಮೇರೆಗೆ ಪಿ ಎಸ್ ಐ ರವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಾವಿಸಿ ಆರೋಪಿಗಳನ್ನು ಹಿಡಿದು ಆಟಕ್ಕೆ ಬಳಸಿದ 52 ಇಸ್ಪಿಟು ಎಲೆ ಮತ್ತು 1620/-ರೂ ಹಣವನ್ನು ವಶಪಡಿಸಿಕೊಂಡು ನ್ಯೂಟೌನ್ ಠಾಣೆಯಲ್ಲಿ ಕೆಸು ದಾಖಲಿಸಿರುತ್ತಾರೆ
ಕೊಲೆ ಪ್ರಕರಣ;-
ಸುಬಾಷ್ ಮತ್ತು ಸುರೆಶ್ ಆರೋಪಿಗಳು ತನ್ನ ತಾಯಿಗೆ ತನ್ನ ತಂದೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾನೆಂದು ಕೊಪಗೊಂಡು ದಿ. 25/12/2004 ರಂದು ತನ್ನ ವಾಸದ ಮನೆಯಲ್ಲಿ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಶವವನ್ನು ಭೂಮಿಯಲ್ಲಿ ಹೂತಿಟ್ಟಿದ್ದು , ಈ ವಿಚಾರವನ್ನು ಆರೋಪಿಗಳಾದ ಬಾಬು ಮತ್ತು ಅನೀಲ್ ಕುಮಾರ್ ಎಂಬುವರು ಕೆರಳ ರಾಜ್ಯ ತ್ರಿಶೂಲ್ ಜಿಲ್ಲೆಯ ವಲ್ಲಪಾಡು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಮತ್ತು ವಿಚಾರಣೆಗೆ ಒಳಪಡಿಸಿದಾಗ ನಿನ್ನ ಸಹಚರರು ಯಾರು ಎಂದು ಎಲ್ಲ ವಿಚಾರಿಸಿದಾಗ ಸುಭಾಷ್ ಮತ್ತು ಸುರೇಶ್ ಎಂಬುವರು ಎಂದಾಗ ಮತ್ತು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯವನ್ನು ತಿಳಿಸಿರುತ್ತಾರೆ, ಈ ಘಟನೇಯು ರಿಪ್ಪನ ಪೆಟೆ ಠಾಣಾವ್ಯಾಪ್ತಿಯಲ್ಲಿ ನಡೆದಿದ್ದು ,ಇದನ್ನು ಎಸ್ ಪಿ ತಿರುವನಂತಪುರಂ ರವರು ಶಿವಮೊಗ್ಗ ಜಿಲ್ಲೆ ರಿಪ್ಪನಪೇಟೆ ಠಾಣೆಗೆ ವರ್ಗಾಯಿಸಿರುತ್ತಾರೆ,


<< Home