SHIMOGA POLICE

Blog of Shimoga Police. This blog is created to post press releases.

Saturday, January 14, 2012

ಶಿವಮೊಗ್ಗ ಜಿಲ್ಲಾ ಅಪರಾದ ವರದಿ ದಿ. ೧೩/೧/2012

ಅಪಘಾತ ಪ್ರಕರಣ :


(1) ದಿನಾಂಕ 13/1/2012 ರಂದು ಬೆಳೆಗ್ಗೆ 9 ಗಂಟೆ ಸುಮಾರಿಗೆ ಟ್ರಾಕ್ಟರ್ ಚಾಲಕ ಗೋಪಾಲ ತಂದೆ ಕೆಂಚಪ್ಪ 21 ವರ್ಷ ವಾಸ : ಸಿದ್ದರಗುಡಿ ಶಿವಮೊಗ್ಗ ಇವರು ಅನಧೀಕೃತವಾದ ಕಲ್ಲುಕೋರೆಯಲ್ಲಿ ಟ್ರಾಕ್ಟರ್ ನಲ್ಲಿ ಕಲ್ಲುಗಳನ್ನು ತುಂಬಿಕೊಂಡು ಮೇಲಕ್ಕೆ ಹತ್ತುವಾಗ ಆಕಸ್ಮಿಕವಾಗಿ ಟ್ರಾಕ್ಟರ್ ಇಂಜಿನ್ ಪಲ್ಟಿಯಾಗಿ ಗೋಪಾಲನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಕಲ್ಲು ಕೋರೆಯು ಯಾವುದೇ ಪರವಾನಿಗೆ ಇಲ್ಲದೆ ಆರೋಪಿಗಳಾದ ಗೋಪಾಲ ತಂದೆ ಕೆಂಚಪ್ಪ ಹಾಗೂ ಈಶ್ವರಯ್ಯ ಯಾನೆ ಪಾಪಣ್ಣ ನಡೆಸುತ್ತಿದ್ದರು. ಈ ಬಗ್ಗೆ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ರಮ ಕೈಗೊಂಡಿರುತ್ತಾರೆ.


(2) ಮುತ್ತಿಗೆ ಮತ್ತು ಬಸವನಂದಿ ಹಳ್ಳಿ ಮಧ್ಯ ರಸ್ತೆಯ ತಿರುವಿನಲ್ಲಿ ಶಿಕಾರಿಪುರ ತಾಲ್ಲೂಕು 8 ಕಿ.ಮೀ. ಪೂರ್ವಕ್ಕೆ ಒಂದು ಟಾಟಾ ಸುಮೇ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿ ಟಾಟಾ ಸುಮೋದಲ್ಲಿದ್ದ 7 ಜನರಲ್ಲಿ ಸದಾಶಿವಪ್ಪ ಬಿನ್ ಮಲ್ಲಪ್ಪ ಕನ್ನೇರ್ ಎಂಬುವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಇನ್ನುಳಿದ ಗಂಭೀರವಾಗಿ ಗಾಯಗೊಂಡ ಸರೋಜಮ್ಮ ಕೋಂ ಗಂಗಾಧರಪ್ಪ ಮತ್ತು ಪುಟ್ಟಮ್ಮ ಕೋಂ ಬಸವರಾಜ್ ರವರು ಈ ದಿವಸ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಮತ್ತು ಸುಶೀಲಮ್ಮರವರ ಸ್ಥಿತಿ ಗಂಭೀರವಾಗಿರುತ್ತದೆ. ಈ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ
ಕ್ರಮ ಕೈಗೊಂಡಿರುತ್ತಾರೆ.


ಕಳ್ಳತನ ಪ್ರಕರಣ :


ಶ್ರೀಮತಿ ಫ್ಲೋರಿನಾ ಡಿಸೋಜ ಕೋಂ ಸತ್ಯನಾರಾಯಣ ಭಟ್ 58 ವರ್ವ ನಿವೃತ್ತ ಶಿಕ್ಷಕಿ ವಾಸ : ರಾಜರಾಜೇಶ್ವರಿ ನಿಲಯ ಜೋಗ ರಸ್ತೆ ಸಾಗರ ಪೇಟೆ ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆ ಬಾಗಿಲ ಬೀಗ ಮುರಿದು ಒಳಗೆ ಪ್ರವೇಶಿಸಿ ಗಾಡ್ರೇಜ್ ಬೀರುವಿನಲ್ಲಿದ್ದ 2 ಬಂಗಾರದ ಬಳೆ, ಮಾಂಗಲ್ಯದ ಸರ, ಒಂದು ಜೊತೆ ಓಲೆ, ಒಂದು ಉಂಗುರ, 12 ಬಂಗಾರದ ಗುಂಡುಗಳು ಮತ್ತು ನಗದು ರೂ. 4,000/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ರಮ ಕೈಗೊಂಡಿರುತ್ತಾರೆ.


ಅಸ್ವಾಭಾವಿಕ ಮರಣ :


(1) ಶ್ರೀಮತಿ ರಂಗಮ್ಮ ಕೋಂ ದಿವಂಗತ ಬಸವರಾಜಪ್ಪ 65 ವರ್ಷ, ವಾಸ : ಅರಿಶಿನಗೆರೆ ಗ್ರಾಮ ಶಿಕಾರಿಪುರ ತಾಲ್ಲೂಕು ಇವರು ತಮ್ಮ ಜಮೀನಿನಲ್ಲಿ ಜೋಳದ ರಾಶಿಯಿಂದ ಜೋಳವನ್ನು ತುಂಬುತ್ತಿದ್ದಾಗ ವಿಷಪೂರಿತ ಹಾವು ಕೈಗೆ ಕಚ್ಚಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿವಸ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ರಮ ಕೈಗೊಂಡಿರುತ್ತಾರೆ.



(2) ಮೃತೆ ಶ್ರೀಮತಿ ಕುಮಾರಿ ಕೋಂ ವಿಜಯ ಮಾಂತೇಶ 27 ವರ್ಷ ವಾಸ : ಕಚ್ಚಗೆಬೈಲು ಗ್ರಾಮ ಹೊಸನಗರ ತಾಲ್ಲೂಕು ಇವರು ಹೆರಿಗೆ ಸಮಯದಲ್ಲಿ ತೀವ್ರತರವಾದ ರಕ್ತಸ್ರಾವವಾಗಿ ನಿಶಕ್ತಳಾಗಿ ಮತ್ತು ಮಗುವು ಸಹ ಸರಿಯಾಗಿ ಬೆಳವಣಿಗೆಯಾಗದೇ ಹುಟ್ಟಿದ್ದು ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯ ಪಕ್ಕದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ರಮ ಕೈಗೊಂಡಿರುತ್ತಾರೆ.