SHIMOGA POLICE

Blog of Shimoga Police. This blog is created to post press releases.

Wednesday, January 04, 2012

ಶಿವಮೊಗ್ಗ ಜಿಲ್ಲಾ ಅಪರಾಧ ವರದಿ ದಿ. ೦೪/೦೧/2012

ಮನುಷ್ಯ ಕಾಣೆ ಪ್ರಕರಣಃ-


1) ಕಾಣೆಯಾದ ಕು. ಅನೀತಾ ಎಸ್ ಬಿನ್ ಷಣ್ಮುಖಪ್ಪ 17 ವರ್ಷ ವಾಸ ಬೇಡನಬೈಲ್ ತೀರ್ಥಹಳ್ಳಿ ತಾ, ಇವಳು ಮನೆಯಿಂದ ತೀರ್ಥಹಳ್ಳಿ ಟೌನ್ ಗೆ ಹೊಗಿ ಬಟ್ಟೆ ಹೊಲಿಸಿಕೊಂಡು ಬರುತ್ತೆನೆಂದು ಹೊದವಳು ಇಲ್ಲಿವರೆಗಾದರೂ ಮನೆಗೆ ವಾಪಸ್ಸಾಗಿರುವದಿಲ್ಲ ಎಂದು ತಂದೆ ಷಣ್ಮುಕಪ್ಪ ಬಿನ್ ಚೌಡಪ್ಪ ಇವರು ತೀರ್ಥಹಳ್ಳಿ ಠಾಣೆಗೆ ದೂರು ನೀಡಿರುವರು.


2) ಪಿರ್ಯಾದಿ ಭವಾನಿಶಂಕರ್ ಬಿನ್ ಶಾಮಣ್ಣ ವಾಸ 6 ನೇಕ್ರಾಸ ಹೊಸಮನೆ ಶಿವಮೊಗ್ಗ ಇವರು ದೋಡ್ಡಪೆಟೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೆನೆಂದರೆ ನನ್ನ ಮಗನಾದ ಬಿ ಎಸ್ ರಾಕೇಶ್ ಬಿನ್ ಭವಾನಿ ಶಂಕರ್ ರಾವ್ 25 ವರ್ಷ ವಿದ್ಯಾರ್ಥಿ ಇತನು ದಿ. 3/1/2012 ರಂದು ಮನೆಯಿಂದ ಹೊರಗೆ ಹೊದವನು ಇಲ್ಲಿಯವರೆಗಾದರೂ ಮನೆಗೆ ವಾಪಸ್ಸಾಗಿರುವದಿಲ್ಲ. ಇತನ ಚಹರೆ ;- 5.6 ಅಡಿ ಎತ್ತರ, ಉದ್ದನೆ ಮುಖ ಸಾಧಾರಣ
ಮೈಕಟ್ಟು ಎಣ್ಣೆಗೆಂಪು ಬಣ್ಣ , ಕನ್ನಡ ಹಿಂದಿ ಇಂಗ್ಲಿಷ್ ಮಾತನಾಡುತ್ತಾನೆ 2 ನೇ ವರ್ಷದ ಲ್ಯಾಬ್ ಟೆಕ್ನಿಷಿಯನ್ ವಿದ್ಯಾಬ್ಯಾಸ ಮಾಡುತ್ತಿದ್ದಾನೆ .ಬಲ ರಟ್ಟೆಯ ಮೆಲೆ ಕಪ್ಪು ಮಚ್ಚೆ ಇರುತ್ತದೆ, ತುಂಬು ತೊಳಿನ ನೀಲಿ ಕಲರ್ ಚೆಕ್ಸ ಶೆಟರ್ ಹಾಗೂ ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿರುತ್ತಾನೆ ,

ಒ ಸಿ ಜೂಜಾಟ ಪ್ರಕರಣಃ-


ಡಿ ಎಸ್ ಪಿ ತೀರ್ಥಹಳ್ಳಿ ಸಾಹೇಬರು ರಿಪ್ಪನಪೆಟೆ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಪಿ ಎಸ್ ಐ ರಿಪ್ಪನ ಪೆಟೆ ಹಾಗೂ ಸಿಬ್ಬಂದಿಯೊಂದಿಗೆ ಜುಮ್ಮಾ ಮಸೀದಿ ಹತ್ತಿರ ಹೊಗಿ ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಬನ್ನಿ ಒಸಿ ಜಾಜಾಟಕ್ಕೆ 01 ರೂ ಗೆ 80 ರೂ ನೀಡಲಾಗುತ್ತೆ ಎನ್ನುತ್ತಿದ್ದಾಗ ಆತನನ್ನು ವಶಕ್ಕೆ ಪಡೆದು 100/- ರೂ ಹಣ 01 ಬಾಸಲ್ ಪೆನ್ . 01 ಒ ಸಿ ಚಿಟಿ ವಶಪಡಿಸಿಕೊಂಡು ಠಾಣೆಯಲ್ಲಿ ಕೇಸು ದಾಖಲಿಸಿರುತ್ತದೆ,


ಅಸ್ವಾಭಾವಿಕ ಸಾವು ಪ್ರಕರಣ;-


1].ಮೃತ ದಿನೇಶ್ ತಂದೆ ಸ್ವಾಮಿರಾವ್ 30 ವರ್ಷ ಈಡಿಗರು ವಾಸ ಪುರದಾಳ್ ಗ್ರಾಮ ಶಿವಮೊಗ್ಗ ಇತನಿಗೆ ವಿಪರಿತ ಕುಡಿಯುವ ಚಟವಿದ್ದು ಆಗಾಗ್ಗೆ ಮನೆಯಲ್ಲಿ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದು , ಹೆಂಡತಿಯನ್ನು ಮನೆಯಿಂದ ತವರು ಮನೆಗೆ ಕಳುಹಿಸಿ , ನಂತರದಲ್ಲಿ ಕ್ರಿಮಿನಾಶಕ ತಂದು ತನ್ನ ಗದ್ದೆಯಲ್ಲಿ ಸೇವಿಸಿ ಮೃತ ಪಟ್ಟಿರುವನು , ಈ ಬಗ್ಗೆ ತುಂಗಾನಗರ ಠಾಣೇಯಲ್ಲಿ ಕೇಸು ದಾಖಲಾಗಿರುತ್ತದೆ,.


2]. ಅನಾಮದೇಯ ಶವವಾಗಿದ್ದು ವಯಸ್ಸು ಸುಮಾರು 25-45 ವರ್ಷ ಇರಬಹುದು, ಕಪ್ಪು ಕಾಚಾ ತೊಟ್ಟಿರುವನು, ಗಂಡಸಿನ ಶವ ವಾಗಿರುತ್ತದೆ, ಈ ಬಗ್ಗೆ ಜೋಗ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ,