SHIMOGA POLICE

Blog of Shimoga Police. This blog is created to post press releases.

Thursday, January 12, 2012

ಶಿವಮೊಗ್ಗ ಜಿಲ್ಲೆಯ ದಿನಿತ್ಯದ ಪ್ರಕರಣಗಳು ದಿ.೧೧/೦೧/2011

ಕೊಲೆ ಪ್ರಕರಣ
ಈ ದಿನ ಬೆಳಿಗ್ಗೆ 9.00 ಗಂಟೆಗೆ ಗೋಪಾಳದಲ್ಲಿ ವಾಸವಾಗಿರುವಂತ ಬಸಪ್ಪ 60 ವರ್ಷ ಮತ್ತು ಚಂದ್ರಮ್ಮ 50 ವರ್ಷ ಇವರುಗಳು ಮಂಡಕ್ಕಿ ಚೀಲವನ್ನುಹೊತ್ತುಕೊಡು ಇನ್ ಕಂ ಟ್ಯಾಕ್ಸ್ ಕಛೇರಿ ಹಿಂಬಾಗದ ರಸ್ತೆಯಲ್ಲಿ ಬರುತ್ತಿರುವಾಗ ಮಂಡಕ್ಕಿ ಚೀಲವನ್ನು ಹೊತ್ತುಕೊಂಡು ಹೋಗುವ ವಿಚಾರದಲ್ಲಿ ಜಗಳ ಮಾಡಿಕೊಂಡುಬಸಪ್ಪನು ಏಕಾಏಕಿ ತನ್ನ ಕ್ಯೆಯಲ್ಲಿದ್ದ ಕತ್ತಿಯಿಂದ ಚಂದ್ರಮ್ಮಳಿಗೆ ಕುತ್ತಿಗೆಗೆ ಹಾಗು ಬಲ ಭುಜಕ್ಕೆಹೊಡೆದು ರಕ್ತಗಾಯ ಮಾಡಿದ್ದು ,108 ವಾಹನದಲ್ಲಿ ಚಂದ್ರಮ್ಮಳನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಮೃತಪಟ್ಟಿರುತ್ತಾಳೆ ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಗುನ್ನೆ ದಾಖಲಿಸಿದೆ
ಕಳವು ಪ್ರಕರಣ
ದಿ.8/1/2011 ರ ರಾತ್ರಿ ರಾಕೇಶ ಜಿ. ವಾಸ ಪಂಪಾನಗರ-ವಿಜಯನಗರ, ಶಿವಮೊಗ್ಗ ಇವರು ತನ್ನ ಕಾರು ನಂ.ಕೆಏ 14 ಎ 0756 ಚವರ್ಲೆಟ್ -ತವೇರಾ ಮೆರೂನ್ ಬಣ್ಣ ನ್ನು ತನ್ನ ಮನೆ ಮುಂದೆ ನಿಲ್ಲಿಸಿದ್ದು ಬೆಳಿಗ್ಗೆ ಎದ್ದು ನೋಡಿದಾಗ ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಹಾಗು ಎಲ್ಲಾ ಕಡೆ
ಹುಡುಕಾಡಿದರೂ ಪತ್ತೆ ಆಗಿಲ್ಲ ಅಂತಾ ಇದ್ದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಗುನ್ನೆ ದಾಖಲಿಸಿದೆ
ಅಫಘಾತ ಪ್ರಕರಣ
ದಿ.10/1/12ರಂದು ಮಂಜಪ್ಪ ದೈವಙ್ಞ ವಾಸ ಮಾಸೂರು ಕೋಡಮಗ್ಗಿ,ಹಿರೆಕೆರೂರು ತಾಲ್ಲೂಕು ಈತನು ಮಂಡಿಯಲ್ಲಿ ಕೂಲಿಕೆಲಸ ಕೆಲಸ ಮುಗಿಸಿ ಹೋಗುತ್ತಿದ್ದಾಗ ಕೆಏ 17 ಬಿ 1353 ಟಾಟಾ ಏಸಿಇ ವಾಹನುವು ಗಾಂದಿ ಬಜಾರ್ ನಿಂದ ಎ ಎ ಸರ್ಕಲ್ ಕಢೆ ಹೋಗುತ್ತಿದ್ದಾಗ ಮಂಡಿಗೆ ನಾನು ಬರುವುದಾಗಿ ಹೇಳಿಗಾಡಿಯನ್ನು ಹತ್ತಿಕೊಂಡು ಹೋಗುತ್ತಿದ್ದಾಗ ಚಾಲಕನು ಅಜಾಗರೂಕತೆ ಹಾಗು ನಿರ್ಲಕ್ಷತನದಿಂದ ಗಾಡಿಯನ್ನು ಚಲಿಸಿದ್ದರಿಂದ ಹಿಂಬದಿ ಕುಳಿತಿದ್ದ ಮಂಜಪ್ಪ
ದೈವಙ್ಞನು ಕಳಗೆ ಬಿದ್ದು ತಲೆಗೆ ಪೆಟ್ಟಾಗಿ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಇದ್ದ ಮೇರೆಗೆ ಶಿವಮೊಗ್ಗ ಸಂಚಾರಿಠಾಣೆಯಲ್ಲಿ ಗುನ್ನೆ ದಾಖಲಿಸಿದೆ
ಅಸ್ವಾಭಾವಿಕ ಮರಣ
ಮಂಜಮ್ಮ ಕೋ ಶೇಷಗಿರಿ 75 ವರ್ಷ ವಾಸ ಕುಸ್ಕೂರು ಇವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು ಮೆಗ್ಗಾನ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ
ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಅಂತಾ ಇದ್ದ ಮೇರೆಗೆ ಗುನ್ನೆ ದಾಖಲಿಸಿದೆ
2) ದಿ.11/1/12ರಂದು ಬಸಪ್ಪ ವಾಸ ಗೋಪಾಳ ಈತನು ತನ್ನಜೊತೆಯಲ್ಲಿ ಹೋಗುತ್ತಿದ್ದ ಚಂದ್ರಮ್ಮಳನ್ನು ಕೊಲೆ ಮಾಡಿದ ವಿಚಾರದಲ್ಲಿ ಆಘಾತಗೊಡು
ಗಾಬರಿಯಾಗಿದ್ದು ಇವನನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು ನಂತರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಇದ್ದ ಮೇರೆಗೆ ತುಂಗಾನಗರಠಾಣೆಯಲ್ಲಿ ಗುನ್ನೆ ದಾಖಲಿಸಿದೆ
3] ಸುಂದರೇಶ ವಾಸ ಆಗುಂಬೆ ಇವರ ಮನೆಯ ಹಿಂಬಾಗದ ಕಾಡಿನಲ್ಲಿ ಒಂದು ಅನಾಮಧೇಯ ಗಂಡಸಿನ ಮೃತದೇಹವು ಕಂಡು ಬಂದಿದ್ದು ಸತ್ತು ಒಂದುವಾರವಾಗಿರಬಹುದು ಆತನ ಮೇಲೆ ಒಂದು ಶರ್ಟ್ ಒಂದು ಕಪ್ಪು ಪ್ಯಾಂಟ್ ಇರುತ್ತದೆ ಜೀವನದಲ್ಲಿ ಜಿಗುಪ್ಸೆಗೊಂಡು ಎಲ್ಲಿಂದಲೋ ಬಂದು ಇಲ್ಲಿ ಸತ್ತಿರಬಹುದೆಂದುಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ