SHIMOGA POLICE

Blog of Shimoga Police. This blog is created to post press releases.

Monday, January 09, 2012

ಶಿವಮೊಗ್ಗ ಜಿಲ್ಲೆಯ ದಿನನಿತ್ಯದ ಪ್ರಕರಣಗಳು ದಿ.೮/೧/12

ಸ್ಪೋಟಕ ವಸ್ತು ಕಾಯ್ದೆ ಪ್ರಕರಣ ಭದ್ರಾವತಿ ಗ್ರಾ.ಠಾಣಾ ವ್ಯಾಪ್ತಿಯ ಪದ್ಮೇನಹಳ್ಳಿಯ ಸವೆ೵ ನಂ.16 ರಲ್ಲಿ ಭುವನೇಶ್ವರ ಎಂ.ಎಂಬುವುವರು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಾ ಕಲ್ಲು
ಹೊಡೆಯಲು ಸ್ಪೋಟಕ ವಸ್ತುಗಳನ್ನು ಬಳಸುತ್ತಿದ್ದಾರೆ ಅಂತಾ ಇದ್ದ ವತ೵ಮಾನದ ಮೇರೆಗೆ ಡಿ.ವ್ಯೆ.ಎಸ್.ಪಿ.ಭದ್ರಾವತಿ ರವರು ಪಂಚರು ಮತ್ತು ಸಿಬ್ಬಂದಿಯವರೊದಿಗೆ
ಹೋಗಿ ದಾಳಿ ಮಾಡಿ 20 ಕೆ.ಜಿ.ಅಮೋನಿಯಂ ನ್ಯೆಟ್ರೇಟ್.,50 ಸಂಖ್ಯೆ ಎಲೆಕ್ರ್ಟಾನಿಕ್ ಟಿಟೋನೇಟರ್.,42 ಜಿಲೆಟಿನ್ ಕಡ್ಡಿಗಳು.,ಒಂದು ಮೆಗ್ಗರ್ ಮಿಷನ್.,50
ಮೀಟರ್ ಎಲೆಕ್ಟ್ರಿಕ್ ವ್ಯೆರ್.,ಹೆಚ್ ಆರ್ ಸಿ ಮಲ್ಟಿ ಟೆಸ್ಟರ್ ಗಳನ್ನು ಅಮಾನತ್ತುಪಡಿಸಿಕೊಡಿದ್ದು ಈತನು ಯಾವುದೇ ಪರವಾನಿಗೆ ಇಲ್ಲದೆ ಕಲ್ಲು ಒಡೆಯಲು ಅಕ್ರಮವಾಗಿ
ಬಳಸುತ್ತಿದ್ದು ಈ ಬಗ್ಗೆ ಭದ್ರಾವತಿ ಗ್ರಾ.ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ
ಕಳವು ಪ್ರಕರಣ ಶ್ರೀ ಹೆಚ್.ಪಿ.ಸುರೇಶ ಇವರು ವಿನೋಬನಗರ ಕಾಶೀಪುರ ರಸ್ತೆಯ ಮನೆಯಲ್ಲಿ ವಾಸವಾಗಿದ್ದು ಗೃಹಬಳಕೆಗೆಂದು ಎರಡು ಹೆಚ್.ಪಿ.ಗ್ಯಾಸ್ ಸಿಲಿಂಡರ್ ಗಳನ್ನುಸುರಕ್ಷತಾ ದೃಷ್ಠಿಯಿಂದ ಮನೆಯ ಹೊರಬಾಗದಲ್ಲಿ ಒಂದು ಗೂಡು ಮಾಡಿ ಅದರಲ್ಲಿಟ್ಟಿದ್ದು ಅದಕ್ಕೆ ಕಬ್ಬಿಣದ ಗ್ರಿಲ್ ಮಾಡಿಸಿ ಬೀಗ ಹಾಕಿರುತ್ತಾರೆ. ಸುಮಾರು
3000/_ರೂ. ಬೆಲೆಯ ಸದರಿ ಸಿಲಿಂಡರುಗಳನ್ನು ದಿ.7.1.12ರ ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ವಿನೋಬನಗರ ಠಾಣೆಯಲ್ಲಿ
ಕೇಸು ದಾಖಲಿಸಿರುತ್ತಾರೆ
ಮೋಸದ ಪ್ರಕರಣ ಶ್ರೀ ಕೆ.ಎಂ.ನ್ಯಾಮತ್ ಇಂಜನೀಯರ್ ಬ್ಯೆಪಾಸ್ ರಸ್ತೆ ಶಿವಮೊಗ್ಗ ಇವರು ತನ್ನ ಸ್ನೇಹಿತನ್ನು ಬಿಡಲು ಕಾರಿನಲ್ಲಿ ಕರೆದುಕೊಂಡು ಬಂದು ಬಿ.ಹೆಚ್.ರಸ್ತೆಯ
ಗಿರಿರಾಜ ದಂತ ಚಿಕಿತ್ಸಾಲಯದ ಬಳಿ ಕಾರನ್ನ ನಿಲ್ಲಿಸಿದಾಗ ಒಬ್ಬ ಆಸಾಮಿ ಬಂದು ನಿಮ್ಮ ನೋಟು ಕೆಳಗೆ ಬಿದ್ದಿದೆ ಅಂತ ಹೇಳಿ ಬೇರೆಡೆಗೆ ಗಮನ ಸೆಳೆದು ಕಾರಿನ
ಹಿಂಬಾಗದಲ್ಲಿ ಇಟ್ಟಿದ್ದ 80,000/-ರೂ.ಗಳಿದ್ದ ಬ್ರೀಫ್ ಕೇಸನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಕೇಸು ದಾಖಲಿಸಿರುವ ಬಗ್ಗೆ
ಆತ್ಮಹತ್ಯೆ ಪ್ರಕರಣ 1] ಶ್ರೀ ಹರೀಶ 21 ವಷ೵ ವಾಲ್ಮೀಕಿ ಜನಾಂಗ ಡ್ರ್ಯೆವರ್ ಕೆಲಸ ವಾಸ ದೊಡ್ಡಪೇಟೆ, ಶಿಕಾರಿಪುರ ಈತನು ಲಾರಿ ಮಾರಿದ ವಿಚಾರದಲ್ಲಿ ಮನಸ್ಸಿಗೆ
ಬೇಜಾರು ಮಾಡಿಕೊಡು ಯಾವುದೋ ವಿಷ ಸೇವಿಸಿ ಮೃತಪಟ್ಟಿರುವ ಬಗ್ಗೆ ಶಿಕಾರಿಪು ಟೌನ್ ಠಾಣೆಯಲ್ಲಿ ಕೇಸು ದಾಖಲಿಸಿರುವ ಬಗ್ಗೆ
2]ಶ್ರೀಮತಿ ಭಾಗ್ಯಭಾಯಿ ಗಂಡ ಕರಿಬಸವವಯ್ಯ 35 ವಷ೵ ವಾಸ ನೆಲವಾಗಿಲು ಇವಳಿಗೆ ಮದುವೆ ಆಗಿ 15 ವಷ೵ಗಳಾಗಿದ್ದು 5 ಹೆಣ್ಣುಮಕ್ಕಳಿದ್ದುಗಂಡನು ಪ್ರತಿದಿನ ಕುಡಿಯುತ್ತಿದ್ದು, ಮುಂದೆ ಹೆಣ್ಣುಮಕ್ಕಳಿಗೆ ಹೇಗೆ ಮದುವೆ ಮಾಡಬೇಕು ಅಂತಾ ಜಿಗುಪ್ಸೆಗೊಂಡು ಯಾವುದೋ ವಿಷ ಸೇವಿಸಿ ಮೃತಪಟ್ಟಿದ್ದು ಈ ಬಗ್ಗೆ
ಶಿಕಾರಿಪುರ ಗ್ರಾ.ಠಾಣೆಯಲ್ಲಿ ಕೇಸು ದಾಖಲಿಸಿರುವ ಬಗ್ಗೆ
ಜೂಜು ಪ್ರಕರಣ 1. ಗಾಜನೂರು ಕೋವಿ ಗಣೇಶ ಇವರ ಅಡಿಕೆ ತೋಟದ ಬಳಿ ಪರವಾನಿಗೆ ಇಲ್ಲದೆ ಅಂದರ-ಬಾಹರ್ ಇಸ್ಪೀಟ್ ಆಡುತ್ತಿರುವಾಗ ದಾಳಿ ಮಾಡಿ ಆಟಕ್ಕೆ
ಬಳಸಿದ್ದ 10,300/-ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು 4 ಜನ ಆರೋಪಿತರಾದ 1]ಸುನಿಲ್,[2]
ದತ್ತಾತ್ರೇಯ [3] ಯಶವಂತ [4] ಪಾಪ ವಾಸ ಹೊಸಳ್ಳಿ ಉಳಿದ ಮೂರು ಜನ ಸೀಗೆಹಟ್ಟಿ ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ ತುಂಗಾನಗರ ಠಾಣೆಯಲ್ಲಿ ಕೇಸು
ದಾಖಲಿಸಿರುವ ಬಗ್ಗೆ
2. ಸೂಳೆಬ್ಯೆಲು ಕಲ್ಲುಕೋರೆ ಬಳಿ ಪರವಾನಿಗೆ ಇಲ್ಲದೆ ಅಂದರ-ಬಾಹರ್ ಇಸ್ಪೀಟ್ ಆಡುತ್ತಿರುವಾಗ ದಾಳಿ ಮಾಡಿ ಆಟಕ್ಕೆ ಬಳಸಿದ್ದ 4320/-ರೂ.
ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು 5 ಜನ ಆರೋಪಿತರಾದ 1]ನೂರ್ ಬೇಗ್,[2] ಜಮೀರ್ [3] ಗೌಸ್ [4]
ನಯಾಜ್ [5]ಶಫಿ ಎಲ್ಲರೂ ವಾಸ ಸೂಳೆಬ್ಯೆಲು ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ ತುಂಗಾನಗರ ಠಾಣೆಯಲ್ಲಿ ಕೇಸು ದಾಖಲಿಸಿರುವ ಬಗ್ಗೆ