ಶಿವಮೊಗ್ಗ ಜಿಲ್ಲಾ ಅಪರಾದ ವರದಿ ದಿ; ೦೫/೦೧/12
ಅಕ್ರಮ ಮದ್ಯ ಮಾರಾಟ :
ದಿನಾಂಕ : 5/1/2012 ರಂದು ಭದ್ರಾವತಿ ನ್ಯೂಟೌನ್ ಠಾಣಾ ವ್ಯಾಪ್ತಿಯ ಜನ್ನಾಪುರದಲ್ಲಿರುವ ಅನ್ನಪೂರ್ಣೇಶ್ವರಿ ವೈನ್ ಸ್ಟೋರ್ ನಲ್ಲಿ ಬ್ರಾಂದಿಯನ್ನು ಚಿಲ್ಲರೆಯಾಗಿ ಗ್ಲಾಸಿಗೆ ಹಾಕಿ ಸಾರ್ವಜನಿಕರಿಗೆ ಕುಡಿಯಲು ಕೊಡುತ್ತಿದ್ದ ಸಮಯದಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಧಾಳಿ ನಡೆಸಿ ವೈನ್ ಸ್ಟೋರ್ ನ ಆಸಾಮಿ ಮಂಜುನಾಥ ಬಿನ್ ಚಿನ್ನೇಗೌಡ 42 ವರ್ಷ ಇವನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿ ಹೈವಾಡ್ಸ್ ವಿಸ್ಕಿ, ಮ್ಯಾಜಿಕ್ ಜಿನ್, ವೆಲ್ಲಿಂಗ್ಟನ್ ವಿಸ್ಕಿ, ಬ್ಯಾಗ್ ಪೈಪರ್, ತ್ರಿಬಲ್ ಎಕ್ಸ್ ರಮ್ ಮಾಲು ಸಮೇತ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿರುತ್ತಾರೆ.
ಅಸ್ವಾಭಾವಿಕ ಸಾವು :
ದಿನಾಂಕ : 30/12/2011 ರಂದು ನಾಗಪ್ಪ ಶೆಟ್ಟಿ ಬಿನ್ ಸೀನ ಶೆಟ್ಟಿ 65 ವರ್ಷ ಸರವಿಗೆ, ತೀರ್ಥಹಳ್ಳಿ ತಾಲ್ಲೂಕು ಇವರು ಸಾಲ ಮಾಡಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಕ್ರಿಮಿನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ದಿ : 05//2012 ರಂದು ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲದಲ್ಲಿ ಸಾವನ್ನಪ್ಪಿರುತ್ತಾರೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕ್ರಮ ಕೈಗೊಂಡಿರುತ್ತಾರೆ.
ವಂಚನೆ ಪ್ರಕರಣ :
ಪಿರ್ಯಾದಿ ಜಯಮ್ಮ ಕೋಂ ಲೇಟ್ಟ ಮಹಾದೇವಪ್ಪ 55 ವರ್ಷ ವಾಸ : ಹರಿಗೆ, ಶಿವಮೊಗ್ಗ ಇವರ ಗಂಡನು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ನಂತರ ನ್ಯಾಯಾಲಯವು ರೂ. 14,65,521/- ಗಳನ್ನು ಮಂಜೂರು ಮಾಡಿದ್ದು ಅದರ ಬಾಬ್ತು ಪಿರ್ಯಾದಿ ಮತ್ತು ಮಗನಿಗೆ ಒಟ್ಟು 8,32,921/- ರೂಪಾಯಿಗಳ ಚೆಕ್ಕನ್ನು ನೀಡಿರುತ್ತದೆ. ಆದರೆ ಪಿರ್ಯಾದಿಯ ವಕೀಲರಾದ ಆರೋಪಿಯು ಹೆಚ್.ಎಂ. ರಾಜಶೇಖರಯ್ಯ ಮತ್ತು ಇಬ್ಬರು ಸೇರಿಕೊಂಡು ಬ್ಯಾಂಕ್ ಖಾತೆ ತೆರೆಯಲು ಪಿರ್ಯಾದಿಯವರ ಸಹಿ ಮತ್ತು ಕೆಲವು ದಾಖಲಾತಿಗಳನ್ನು ಪಡೆದು ದಿ : 29/12/2011 ರಂದು ಆರೋಪಿಗಳು ಚೆಕ್ಕನ್ನು ನಗದೀಕರಣಗೊಳಿಸಿಕೊಂಡು ಪಿರ್ಯಾದಿಯವರಿಗೆ ಕೊಡದೇ ವಂಚಿಸಿರುತ್ತಾರೆ. ಈ ಬಗ್ಗೆ ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ;
ಶ್ರೀ ಮತಿ ಕೋಕಿಲ ಕೋಂ ರಂಗನಾಥ ವಾಸ ಅರೆಬಿಳಚಿ ಕ್ಯಾಂಪ್ ಇವರನ್ನು 5 ವರ್ಷಗಳ ಹಿಂದೆ ಮಧುವೆ ಮಾಡಿಕೊಟ್ಟಿದ್ದು ಗಂಡನು ಕುಡಿದು ಬಂದು ದಹಿಕ ಹಾಗು ಮಾನಸಿಕ ಹಿಂಸೆ ಕೊಡುತ್ತಿದ್ದು,ಹಿಂಸೆಯನ್ನು ತಾಳಲಾರದೆ ಕೋಕಿಲಾಳು ದಿ 5/01/12 ರಂದು ನೇಣುಹಾಕಿಕೊಂಡು ಸಾವನ್ನಪ್ಪಿರುತ್ತಾಳೆ.ಹೊಳೆಹೊನ್ನುರು ಠಾಣೆಯಲ್ಲಿ ಕೇಸು ದಾಖಲಿಸಿದೆ.


<< Home