ಶಿವಮೊಗ್ಗ ಜಿಲ್ಲಾ ಅಪರಾಧ ಪ್ರಕರಣಗಳು ದಿ;09/01/2012
ಹಳೇಯ ದ್ವೇಷದಿಂದ ಕೂಲೆ ;-
ಶಿವಯ್ಯ ಬಿನ್ ಪೋಲಯ್ಯ ಹಾಗು ಇತರೆ ಐದು ಜನ ಸೇರಿ ನಾರಾಣಪ್ಪ ಸಿದ್ದರಕಾಲೋನಿ ಇವರನ್ನು ಜಮೀನಿನ ವಿಚಾರದಲ್ಲಿ ಹಳೇ ದ್ವೇಶದಿಂದ ತನ್ನ ಗಂಡ ನನ್ನು ಕೊಲೆ ಮಾಡಿರುತ್ತಾರೆಂದು ಮ್ರತನ ಪತ್ನಿ ಹೊಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿರುತ್ತಾರೆ.
ರಸ್ತೆ ಅಪಘಾತದಿಂದ ಸಾವು;-
ಶಾಂತಕುಮಾರ ಬಿನ್ ಚಂದ್ರಪ್ಪ , ಕೂಲಿ ಕೆಲಸ ಗೌರಾಪುರ ಭದ್ರಾವತಿ ರವರಿಗೆ ಜಲ್ಲಿ ತುಂಬಿದ ಟ್ರಾಕ್ಟರ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಮೃತಪಟ್ಟಿರುತ್ತಾನೆಂದು ಭದ್ರಾವತಿ ಸಂಚಾರಿ ಠಾಣೆ ಯಲ್ಲಿ ದೂರು ದಾಖಲಾಗಿರುತ್ತದೆ.
ಕಳ್ಳತನ ಪ್ರಕರಣ ;-
ಲಲಿತಮ್ಮ ಕೋಂ ಸುರೇಶ್ ಗೌಡ ಕುಡುಮಲ್ಲಿಗೆ ಗ್ರಾಮ ತೀರ್ಥಹಳ್ಳಿ ತಾ// ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಅಂದಾಜು 24,000 ರೂ ಬೆಲೆಯ ಚಿನ್ನ ಹಾಗೂ ಬೆಳ್ಳಿಯ ವಡವೆ ಗಳನ್ನು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡಿರುತ್ತಾರೆಂದು ಮಾಳೂರು ಠಾಣೆ ಯಲ್ಲಿ ದಾಖಲಾಗಿರುತ್ತದೆ.


<< Home