SHIMOGA POLICE

Blog of Shimoga Police. This blog is created to post press releases.

Friday, January 06, 2012

ದಿಃ06-01-2012ರಂದು ಶಿವಮೊಗ್ಗ ಜಿಲ್ಲೆಯಲ್ಲಿ ವರದಿಯಾದ ಅಪರಾಧ ಪ್ರಕರಣಗಳ ವರದಿ.

ಮಾನಭಂಗಕ್ಕೆ ಪ್ರಯತ್ನ ಪ್ರಕರಣಃ-
ಹೊಸನಗರ ಠಾಣೆ ಗುನ್ನೆ ನಂ. 06/2012, ಕಲಂ. 448, 354 ಐಪಿಸಿ.
ಪಿರ್ಯಾದಿ ಶ್ರೀಮತಿ ಜೆಸ್ಸಿ ಕೋಂ ತಂಗಚ್ಚ ಎಂ ಕೆ, 35 ವರ್ಷ, ಮನೆ ಕೆಲಸ ವಾಸ ಮಾವಿನಹೊಳೆ, ಮಾರುತಿಪುರ, ಹೊಸನಗರ ಇವಳು ದಿಃ 06-01-2012 ರಂದು ಬೆಳಿಗ್ಗೆ 10-30ಗಂಟೆಗೆ ಸಮಯದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಾಗ ಸುರೇಶ ಫಾರೆಸ್ಟ್ ಗಾರ್ಡ್, ಹೊಸನಗರ ವಲಯ, ಹೊಸನಗರ ಈತನು ಪಿರ್ಯಾದಿ ಮನೆಗೆ ಹೇಳದೇ ಕೇಳದೇ ಒಳಗೆ ಹೋಗಿ ಕುಡಿಯಲು ನೀರನ್ನು ಕೇಳಿದಾಗ ಪಿರ್ಯಾದಿ ನೀರನ್ನು ತಂದು ಕೊಟ್ಟಾಗ ನಿನ್ನ ಗಂಡ ಎಲ್ಲಿಗೆ ಹೋಗಿದ್ದಾರೆಂದು ಕೇಳಿದಾಗ ಪಿರ್ಯಾದಿಯು ಕೆಲಸಕ್ಕೆ ಹೇಳಿದಾಗ ಸುರೇಶನು ಪಿರ್ಯಾದಿಯನ್ನು ಹಿಡಿದುಕೊಂಡು ಮಾನಭಂಗಕ್ಕೆ ಪ್ರಯತ್ನಿಸಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

ಕಳುವು ಪ್ರಕರಣಃ-
ಪೇಪರ್ ಟೌನ್ ಠಾಣೆ ಗುನ್ನೆ ನಂ. 03/2012, ಕಲಂ. 392, 253 ಐಪಿಸಿ.
ಪಿರ್ಯಾದಿ ಹೆಚ್.ಚನ್ನಪ್ಪ, ಸಿ.ಹೆಚ್.ಸಿ. 687, ಪೊಲೀಸ್ ಅರಣ್ಯ ಸಂಚಾರಿ ದಳ, ಚನ್ನಗಿರಿ ಇವರು ದಿಃ 06-01-2012 ರಂದು ಉಂಬ್ಳೆಬೈಲು ಕಛೇರಿಗೆ ಟಪ್ಪಾಲು ಕೊಟ್ಟು ವಾಪಾಸ್ಸು ಬರುವಾಗ ಕೇಶವ ಆಚಾರಿ ಬಿನ್ ದಿ|| ವೀರಾಚಾರಿ, 26 ವರ್ಷ, ಹೌಸಿಂಗ್ ಬೋರ್ಡ್ ಕಾಲೋನಿ, ಬೊಮ್ಮನಕಟ್ಟೆ, ಭದ್ರಾವತಿ ಈತನು ಪಿರ್ಯಾದಿಯ ಕೊರಳಿಗೆ ಕೈಹಾಕಿ ಕೊರಳಿನಲ್ಲಿದ್ದ ಬಂಗಾರದ ಚೈನ್ ಅದರಲ್ಲಿದ್ದ ಗಣಪತಿ ಡಾಲರ್ ಸಹಿತ ಕಿತ್ತುಕೊಂಡು ಓಡಿ ಹೋಗಿರುತ್ತಾನೆ. ನಂತರ ತಿಮ್ಲಾಪುರ ರಸ್ತೆಯಲ್ಲಿ ಓಡಿ ಹೋಗುತ್ತಿದ್ದ ಆರೋಪಿಯನ್ನು ಹಿಡಿದು ಪೇಪರ್ ಟೌನ್ ಠಾಣೆಗೆ ಕರೆತಂದಿರುತ್ತಾರೆ. ಆರೋಪಿಯು ಕಿತ್ತುಕೊಂಡಿರುವ ಬಂಗಾರದ ಚೈನ್ ಕೊಡಿಸಿಬೇಕಾಗಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.


ಅಸ್ವಾಭಾವಿಕ ಸಾವು ಪ್ರಕರಣಃ-
ಶಿಕಾರಿಪುರ ಗ್ರಾಮಾಂತರ ಠಾಣೆ ಗುನ್ನೆ ನಂ. 01/2012, ಕಲಂ. 174 ಸಿ.ಆರ್.ಪಿ.ಸಿ.

ಅಭಿಷೇಕ್ ಬಿನ್ ಯೋಗೇಶನಾಯ್ಕ, 2 ವರ್ಷ, ವಾಸ ಹೊಸಗೊದ್ದನಕೊಪ್ಪ ಗ್ರಾಮ ಶಿಕಾರಿಪುರ ತಾಲ್ಲೂಕು ಈತನು ದಿಃ 28-12-2011 ರಂದು ಬೆಳಿಗ್ಗೆ ಆಕಸ್ಮಿಕವಾಗಿ ಬಿಸಿ ನೀರು ಪಾತ್ರೆ ಹಿಡಿದು ಎಳೆದಾಡಿ ಬಿಸಿ ನೀರು ಮೈಮೇಲೆ ಚೆಲ್ಲಿ ದೇಹದ ಬೆನ್ನು ಮತ್ತು ಕೆಳಭಾಗದಲ್ಲಿ ಸುಟ್ಟು ಹೋಗಿದ್ದು, ಚಿಕಿತ್ಸೆಗಾಗಿ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ದಿಃ 06-01-2012ರಂದು ಮೃತಪಟ್ಟಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

ಇಸ್ಪೀಟು ಜೂಜಾಟ ಪ್ರಕರಣಃ-
ಸಾಗರ ಗ್ರಾಮಾಂತರ ಠಾಣೆ ಗುನ್ನೆ ನಂ. 04/2012, ಕಲಂ. 87 ಕೆ.ಪಿ. ಆಕ್ಟ್.
ದಿನಾಂಕಃ 06-01-2012ರಂದು ಸಂಜೆ 5-00ಗಂಟೆಗೆ ಸಿಪಿಐ ಸಾಗರ ಗ್ರಾಮಾಂತರ ವೃತ್ತ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಾಗರ ತಾಲ್ಲೂಕು ಚಿಪ್ಲಿ ಗ್ರಾಮದ ಕೆರೆಯ ಏರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನು ಸುತ್ತುವರೆದು ದಾಳಿ ಮಾಡಿ ಜೂಜಾಟಕ್ಕೆ ಬಳಸಿದ ರೂ. 5285 ನಗದು ಹಾಗೂ 52 ಇಸ್ಪೀಟು ಎಲೆಗಳನ್ನು ಅಮಾನತ್ತುಪಡಿಸಿಕೊಂಡು 7 ಜನ ಆರೋಪಿಗಳನ್ನು ಠಾಣೆಗೆ ಕರೆ ತಂದು ಪ್ರಕರಣ ದಾಖಲಿಸಿದೆ.